ಚತುರ್ವೇದ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
{tocify} $title={ವಿಷಯ ಸೂಚಿ}
ಅರ್ಥ
ನಾಮಪದ:
ನಾಲ್ಕು ವೇದಗಳು,
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಗಳನ್ನು ಚತುರ್ವೇದ ಅಂದರೆ ನಾಲ್ಕುವೇದಗಳು ಎನ್ನುತ್ತಾರೆ.
ಗುಣವಾಚಕ:
ನಾಲ್ಕು ವೇದಗಳಿಗೆ ಸಂಬಂಧಿಸಿದ
ಉಪಯೋಗ
ನಾಮಪದ:
ಚತುರ್ವೇದಗಳು ಋಷಿ ಮುನಿಗಳ ಕೊಡುಗೆ.
ಗುಣವಾಚಕ:
ಜಾಣಸಿಂಹರು ಚತುರ್ವೇದ ಪಾರಂಗತರು ಆಗಿದ್ದರು.
ಚತುರ್ವೇದ ಬಲ್ಲ ಅವರ ಪಾಂಡಿತ್ಯಕ್ಕೆ ಮೇರೆ ಇರಲಿಲ್ಲ.
ಉತ್ಪತ್ತಿ
ಚತುರ್ ಎಂದರೆ ಸಂಸ್ಕೃತದಲ್ಲಿ ನಾಲ್ಕು ಎಂದರ್ಥ. ವೇದ ಎಂದರೆ ಜ್ಞಾನ ಅಥವಾ ವಿವೇಕ ಎಂದರ್ಥ. ವೇದಗಳು ಅತ್ಯಂತ ಹಳೆಯ ಹಿಂದೂ ಪವಿತ್ರ ಗ್ರಂಥಗಳಾಗಿವೆ.
ವೇದಗಳು ಓಟ್ಟೂ ನಾಲ್ಕು:
- ಋಗ್ವೇದ
- ಯಜುರ್ವೇದ
- ಸಾಮವೇದ
- ಅಥರ್ವವೇದ
ಚತುರ್ + ವೇದ = ಚತುರ್ವೇದ
ವಿವರ
ವೇದಗಳು ಅತ್ಯಂತ ಹಳೆಯ ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳು. ಇವುಗಳ ಮೂಲ ಭಾರತ. ಇವು ಸಂಸ್ಕೃತ ಭಾಷೆಯಲ್ಲಿವೆ.
ಮೊದ ಮೊದಲು ಋಷಿ ಮುನಿಗಳು ಪೀಳಿಗೆಯಿಂದ ಪೀಳಿಗೆಗೆ ಕಂಠಪಾಟದ ಮೂಲಕ ವೇದಗಳನ್ನು ತಲುಪಿಸಿದರು. ನಂತರ ಹಲವು ಶತಮಾನಗಳ ನಂತರ ತಾಳೆಗರಿಯ ಮೇಲೆ ಲಿಪಿ ಬಳಸಿ ಬರೆದಿಡಲಾಯ್ತು.
ವೇದಗಳು ಓಟ್ಟೂ ನಾಲ್ಕು:
- ಋಗ್ವೇದ
- ಯಜುರ್ವೇದ
- ಸಾಮವೇದ
- ಅಥರ್ವವೇದ
ಈ ನಾಲ್ಕೂ ವೇದಗಳ ಗುಂಪಿಗೆ ಚತುರ್ವೇದ ಎನ್ನುತ್ತಾರೆ. ಒಬ್ಬರು ಚತುರ್ವೇದ ಬಲ್ಲವರು ಎಂದರೆ ಈ ನಾಲ್ಕೂ ವೇದಗಳನ್ನು ಓದಿ ಅಭ್ಯಾಸ ಮಾಡಿ ಅರ್ಥ ಮಾಡಿಕೊಂಡವರು. ವಿದ್ವಾಂಸರು. ಇವರನ್ನು ಚತುರ್ವೇದಿಗಳು ಎಂದು ಕರೆಯುತ್ತಾರೆ.
ಕಾಲಮಾನ
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
ನಾಲ್ಕು ವೇದ
ಏಕ ವಚನ / ಬಹು ವಚನ
ಚತುರ್ವೇದ ಎಂದರೇ ನಾಲ್ಕು ವೇದಗಳು ಅಂದರೆ ಅದೇ ಬಹುವಚನ.
ಆದರೂ ಕೆಲವು ಬಳಕೆಗಳಲ್ಲಿ ಬಹುವಚನ ಎಂದು ಒತ್ತಿ ಹೇಳಲು ಹಾಗೂ ಗೌರವ ಪೂರಕವಾಗಿ ಚತುರ್ವೇದಗಳು ಎಂದು ಬಳಸುತ್ತಾರೆ. ಚತುರ್ವೇದಗಳು ಇದು ಕೂಡಾ ಬಹುವಚನ ಪದ.
ಉದಾಹರಣೆ:
- ಚತುರ್ವೇದಗಳು ತುಂಬಾ ಪವಿತ್ರವಾದ ಗ್ರಂಥಗಳು.
ಇನ್ನಷ್ಟು ವಿಭಕ್ತಿ ಪ್ರತ್ಯಯಗಳ ಸಮೇತ ಉದಾಹರಣೆಗಳು
- ಚತುರ್ವೇದಗಳನ್ನು ಬಹಳ ಹಿಂದೆ ವಿವಿಧ ಗುರುಕುಲಗಳಲ್ಲಿ ಕಲಿಸುತ್ತಿದ್ದರು.
- ಚತುರ್ವೇದಗಳಿಂದ ನಾವು ಕಲಿಯುವದು ತುಂಬಾ ಇದೆ.
- ಚತುರ್ವೇದಗಳಿಗೆ ಇರುವ ಗೌರವ ವರ್ಣಿಸಲು ಅಸಾಧ್ಯ.
- ಚತುರ್ವೇದಗಳ ಕಲಿತವರನ್ನು ಚತುರ್ವೇದಿಗಳು ಎನ್ನುತ್ತಾರೆ.
- ಚತುರ್ವೇದಗಳಲ್ಲಿ ಇರುವ ಜ್ಞಾನ ಗ್ರಹಿಸಲು ಶ್ರಮ ಬೇಕು.
- ಚತುರ್ವೇದಗಳೇ ಮಂತ್ರಗಳ ಮೂಲ ಆಧಾರ.
ವಿರುದ್ಧ ಅರ್ಥದ ಪದಗಳು
ಇದು ಇರುವ ಬೇರೆ ಪದಗಳು
ಚತುರ್ವೇದ ಸ೦ಹಿತಾ ಪಾರಾಯಣ ಯಾಗ
ಚತುರ್ವೇದ ಸ೦ಹಿತಾ ಯಾಗ
ಚತುರ್ವೇದ ಮಹಾ ಯಾಗ
ಚತುರ್ವೇದ ಯಾಗ
ಚತುರ್ವೇದ ಹೋಮ
ಇದು ಇರುವ ನುಡಿಗಟ್ಟು
ಸಂಬಂಧ ಪಟ್ಟ ಪದಗಳು
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಚತುರ್ವೇದಿ, ವೇದ
ಆಧಾರಿತ ಪದಗಳು
ಚತುರ್ವೇದಿ - ನಾಲ್ಕೂ ವೇದಗಳನ್ನು ಓದಿ ಕೊಂಡಿರುವವರು.
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಫೋರ್ ವೇದಾಸ್
ಹಿಂದಿ: ಚಾರ್ ವೇದ
ಸಂಸ್ಕೃತ: ಚತುರ್ವೇದ
Meaning in English
Four Vedas
हिंदी में अर्थ
चार वेद
संस्कृत अर्थ
चतुर्वेद