ಹಗಲುಗನಸು

ಹಗಲುಗನಸು
ಪದಮಂಜರಿ.ಕಾಂ  
ಹಗಲುಗನಸು ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
{tocify} $title={ ವಿಷಯ ಸೂಚಿ}

ಅರ್ಥ

ನಾಮಪದ(೧):

  • ವಾಸ್ತವಿಕತೆ ಅಥವಾ ನೈಜತೆಯಿಂದ ದೂರವಾದ ಯೋಚನೆಗಳು.
  • ಎಚ್ಚರ ಇದ್ದಾಗ ಕಾಣುವ ಕನಸು
  • ಹಗಲಿನಲ್ಲಿ ಕಾಣುವ ಕನಸು
  • ಕಲ್ಪನೆಗಳು
  • ಸಾಧ್ಯತೆ ಕಡಿಮೆ ಇರುವದನ್ನು ಅಥವಾ ಅಸಾಧ್ಯವಾದುದನ್ನು ಮಾಡಿದಂತೆ ವಿಚಾರ ಮಾಡುವದು. ಆದರೆ ಅದನ್ನು ಸಾಧಿಸಲು ಯಾವ ಪ್ರಯತ್ನವನ್ನು ಮಾಡುವದಿಲ್ಲ.
  • ಆಗದಿರುವದನ್ನು ಮಾಡಿ ಗೆದ್ದಂತೆ ಯೋಚನಾ ಲಹರಿಗಳು.
ನಾಮಪದ(೨):

ಬೆಳಿಗ್ಗೆ ಏಳುವದಕ್ಕಿಂತ ಸ್ವಲ್ಪ ಮುಂಚೆ ಬಿದ್ದ ಕನಸು.

ನಾಮಪದ(೩):

ಭ್ರಮಾ ಲೋಕ, ಕಲ್ಪನಾ ಲೋಕ

ಉತ್ಪತ್ತಿ

ಹಗಲಿನಲ್ಲಿ ಎನ್ನುವದು ಹಗಲು ಪದದ ಸಪ್ತಮಿ ವಿಭಕ್ತಿ ಪ್ರತ್ಯಯದ ರೂಪ. ಈ ವಿಭಕ್ತಿ ಪ್ರತ್ಯಯ ಲೋಪವಾಗಿ ಹಗಲುಗನಸು ಪದದಲ್ಲಿ ಬರೀ ಹಗಲು ಎಂದಾಗಿದೆ.

ಹಗಲುಗನಸು ಪದದಲ್ಲಿ ಕನಸು ಪದದ ಅರ್ಥ ತುಂಬಾ ಮುಖ್ಯವಾದದ್ದು.

ಎರಡು ನಾಮಪದಗಳು ಸೇರಿ ಮೊದಲ ಪದದ ವಿಭಕ್ತಿ ಪ್ರತ್ಯಯ ಲೋಪವಾಗಿ ಎರಡನೆಯ ನಾಮಪದದ ಅರ್ಥ ಮುಖ್ಯವಾಗಿದ್ದರೆ ಅದಕ್ಕೆ ತತ್ಪುರುಷ ಸಮಾಸ ಎನ್ನುತ್ತಾರೆ.

ಹಗಲಿನಲ್ಲಿ + ಕನಸು = ಹಗಲುಗನಸು

ಇಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಲೋಪ ಆಗುವದರಿಂದ ಸಪ್ತಮಿ ತತ್ಪುರುಷ ಸಮಾಸ ಎನ್ನುತ್ತಾರೆ.

ಉಪಯೋಗ

ನಾಮಪದ(೧):
  • ಚತುರಸಿಂಹ ದಿನವಿಡೀ ತಾನೇ ರಾಜನಾದಂತೆ ಹಗಲುಗನಸು ಕಾಣುತ್ತಿದ್ದ. ಬೇರೆ ಏನೂ ಕೆಲಸ ಮಾಡುತ್ತಿರಲಿಲ್ಲ.
  • ಪರೀಕ್ಷೆಗೆ ಗುಂಡ ಸ್ವಲ್ಪವೂ ಓದಿರಲಿಲ್ಲ, ಇಡೀ ರಾಜ್ಯಕ್ಕೆ ಮೊದಲ  ಶ್ರೇಣಿ ಬಂದಂತೆ ಹಗಲುಗನಸು ಕಾಣುತ್ತಾ ಕಾಲ ಕಳೆದ. ಎಕ್ಸಾಮ್ ಹತ್ತಿರ ಬಂತು.
ನಾಮಪದ(೨):
  • ಬೆಳಿಗ್ಗೆ ನಿದ್ದೆಯಲ್ಲಿ ಹಗಲುಗನಸು ಕಾಣುತ್ತಿದ್ದ ಕಿಟ್ಟಿಯನ್ನು ಅಮ್ಮ ಬಂದು ಎಬ್ಬಿಸಿದಳು.
ನಾಮಪದ(೩):
  • ಹಗಲುಗನಸಿನಲ್ಲೇ ಮುಳುಗಿ ಹೋಗಿದ್ದ ಕಂಪೆನಿ ಮಾಲೀಕರಿಗೆ ಕಾಂಪಿಟೇಶನ್ ಜಾಸ್ತಿ ಆಗಿದ್ದು ತಿಳಿಯಲೇ ಇಲ್ಲ.

ವಿವರ

ಹಗಲಿನಲ್ಲಿ ಕಾಣುವ ಕನಸು ಹಗಲುಗನಸು. 

ಹಗಲು ಎಂದರೆ ದಿನದ ಬೆಳಕಿರುವ ಸಮಯ. ಸೂರ್ಯ ಉದಯದಿಂದ ಸೂರ್ಯಾಸ್ತ ಆಗುವ ನಡುವಿನ ಕಾಲ. ಕನಸು ಎಂದರೆ ರಾತ್ರಿ ನಿದ್ದೆಯಲ್ಲಿ ಸುಪ್ತ ಮನಸ್ಸಿನಲ್ಲಿ ಬರುವ ಭ್ರಮೆ, ಯೋಚನಾ ಲಹರಿ.

ದಿನವಿಡೀ ಮಾಡಬೇಕಾದ ಕೆಲಸ ಮಾಡದೇ ಪರಿಶ್ರಮ ಪಡದೇ ಬರೀ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ನಾನು ಅದಾಗುತ್ತೇನೆ, ಅಷ್ಟು ಹಣ ಗಳಿಸುತ್ತೇನೆ, ದೊಡ್ಡ ಮನೆ ಕಟ್ಟುವೆ. ಕಾರು ಕೊಳ್ಳುವೆ ಎನ್ನುತ್ತಾ ಕಾಲವನ್ನು ವ್ಯರ್ಥ ಮಾಡುವದಕ್ಕೆ ಹಗಲುಗನಸು ಎನ್ನುತ್ತಾರೆ.

ಯಾವುದೇ ಗುರಿಯನ್ನು ಕೇವಲ ವಿಚಾರ ಮಾಡುತ್ತಾ, ಪ್ಲಾನ್ ಮಾಡುತ್ತಾ ಕಳೆದರೆ ಏನೂ ಸಾಧನೆ ಆಗದು. ಅದಕ್ಕೆ ಪ್ರಯತ್ನ ಅತಿ ಮುಖ್ಯ. ಕೇವಲ ಬರಿ ಯೋಚನೆ ಮಾಡುತ್ತಾ ಕಾರ್ಯರೂಪಕ್ಕೆ ತರದಿದ್ದರೆ ಅದು ಹಗಲುಗನಸು ಎನ್ನಬಹುದು.
 
ಸಾಮಾನ್ಯವಾಗಿ ಕನಸುಗಳು ರಾತ್ರಿ ಗಾಢ ನಿದ್ದೆಗೆ ಮುನ್ನ ಬರುತ್ತದೆ. ಬೆಳಿಗ್ಗೆ ಏಳುವ ಮುನ್ನ ಕಾಣುವ ಕನಸಿಗೂ ಹಗಲುಗನಸು ಹೇಳುತ್ತಾರೆ.

ಕಾಲಮಾನ

ಬಹಳ ಹಿಂದೆ ಹಳೆ ಕನ್ನಡದಲ್ಲಿ ಹಗಲಿಗೆ ಅಹ ಎಂಬ ಪದ ಬಳಸುತ್ತಿದ್ದರು. ಉದಾ ಅಹರ್ನಿಶಾ ಎಂದರೆ ಹಗಲು-ರಾತ್ರಿ ಎಂಬರ್ಥ ಇದೆ. 

೧೮೯೪ರ ಕಿಟ್ಟೆಲ್ ನಿಘಂಟಲ್ಲಿ ಹಗಲು ಹಾಗೂ ಕನಸು ಪ್ರತ್ಯೇಕ ಪದವಿದೆ. ಹಗಲು ಪದ ಇರುವ ಇತರ ಪದ ಇದ್ದರೂ ಹಗಲುಗನಸು ಪದ ಇಲ್ಲ. 

ಇಂಗ್ಲೀಷ್ ಅಲ್ಲಿ DayDream (ಡೇ ಡ್ರೀಮ್) ಅನ್ನೋ ಪದ ಸುಮಾರು ೧೭ನೇ ಶತಮಾನಕ್ಕೆ ಹುಟ್ಟಿರುವ ಕುರುಹು ಇದೆ. ಬಹುಶಃ ಈ ಪದ ಆಂಗ್ಲ ಭಾಷೆಯಿಂದ ಸ್ಪೂರ್ತಿ ಪಡೆದು ಕನ್ನಡದಲ್ಲಿ ಹಗಲುಗನಸು ಹುಟ್ಟಿರುವ ಸಾಧ್ಯತೆ ಇದೆ.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

ಭ್ರಮಾ ಲೋಕ, ಕಲ್ಪನಾ ಲೋಕ

ಏಕ ವಚನ / ಬಹು ವಚನ

ಹಗಲುಗನಸುಗಳು ಎಂದರೆ ಒಂದಕ್ಕಿಂತ ಹೆಚ್ಚು ಹಗಲುಗನಸುಗಳು.

ಉದಾಹರಣೆ:
ಬರೀ ಹಗಲುಗನಸುಗಳಲ್ಲೇ ಆತ ಕಾಲ ಕಳೆಯುತ್ತಿದ್ದ. ಯಾವ ಪರಿಶ್ರಮ ಪಡಲೇ ಇಲ್ಲ.

ವಿರುದ್ಧ ಅರ್ಥದ ಪದಗಳು

-- o --

ಇದು ಇರುವ ಬೇರೆ ಪದಗಳು

-- o --

ಇದು ಇರುವ ನುಡಿಗಟ್ಟು

-- o --

ಸಂಬಂಧ ಪಟ್ಟ ಪದಗಳು

-- o --

ಆಧಾರಿತ ಪದಗಳು

-- o --

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಡೇ ಡ್ರೀಮ್
ಹಿಂದಿ: ದಿನ್ ಕಾ ಸಪ್ನಾ
ಸಂಸ್ಕೃತ: ದಿವಾ ಸಪ್ನ

Meaning in English

Day dream

हिंदी में अर्थ

दिन का सपना

संस्कृत अर्थ

दिवा सप्न
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು