English: kshipaNi (Kannada) = Missile, Rocket Weapon
हिंदी: क्षिपणि (कन्नड) = रॉकेट , प्रक्षेपास्त्र, अग्निबाण, फेंक मारने का अस्त्र, क्षिपणी
संस्कृत: क्षिपणि (कन्नड) = क्षिपणि / क्षिपणी
ಅರ್ಥ
ಉತ್ಪತ್ತಿ
ಉಪಯೋಗ
- ಶತ್ರು ತಾಣದ ಮೇಲೆ ಇಂದು ಭಾರತೀಯ ಸೇನೆ(ಆರ್ಮಿ) ಕ್ಷಿಪಣಿ ದಾಳಿ ನಡೆಸಿತು.
- ೫೦೦೦ ಕಿಮೀ ಸಾಮರ್ಥ್ಯ ಉಳ್ಳ ಕ್ಷಿಪಣಿಯ ಪರೀಕ್ಷೆ ನಮ್ಮ ಸೈನ್ಯ ಯಶಸ್ವಿಯಾಗಿ ನಡೆಸಿತು.
ಹಿನ್ನೆಲೆ
ಸಾಮಾನ್ಯವಾಗಿ ಯುದ್ಧದಲ್ಲಿ ಹೋರಾಡಲು ಸೈನ್ಯ ಬಳಸುವ, ಚಿಮ್ಮಿ ತುಂಬಾ ದೂರದ ಶತ್ರು ತಾಣದ ಮೇಲೆ ದಾಳಿ ಮಾಡಿ ಸ್ಪೋಟವಾಗಿ ನಾಶ ಮಾಡುವ ಸಾಮರ್ಥ್ಯವುಳ್ಳ ಅಸ್ತ್ರಕ್ಕೆ ಕ್ಷಿಪಣಿ ಎನ್ನುತ್ತಾರೆ. ಸಾಮಾನ್ಯವಾಗಿ ಕ್ಷಿಪಣಿ ಯುದ್ಧದಲ್ಲಿ ಹಾಗೂ ಸೈನ್ಯ ಬಳಸುವ ವಸ್ತು.
ಗಮನಿಸಿ ಉಪಗ್ರಹ ಬಾಹ್ಯಾಕಾಶಕ್ಕೆ ಕಳುಹಿಸುವ ರಾಕೆಟ್ ಗೆ ಕೂಡಾ ಕ್ಷಿಪಣಿ ತರಾನೇ ಚಿಮ್ಮುವ ಸಾಮರ್ಥ್ಯ ಇದ್ದರೂ ಅದು ಅಸ್ತ್ರ ಅಲ್ಲ. ಆದ್ದರಿಂದ ಬರಿ ರಾಕೆಟ್ ಕ್ಷಿಪಣಿ ಅಲ್ಲ. ರಾಕೆಟ್ ಭೂಮಿಯ ವಾತಾವರಣ ದಾಟಿ ಬಾಹ್ಯಾಕಾಶಕ್ಕೆ ಹೋಗುವ ಸಾಮರ್ಥ ಇದ್ದು ಅದು ಸಿಡಿ ತಲೆ ಹೊಂದಿರುವದಿಲ್ಲ. ಬದಲಾಗಿ ಉಪಗ್ರಹ / ಬಾಹ್ಯಾಕಾಶ ಕೇಂದ್ರ ಇದ್ದು ಅದನ್ನು ಸ್ಥಾಪಿಸುವ ಉದ್ದೇಶ ಇರುತ್ತದೆ.
ಆದರೆ ರಾಕೆಟ್ ಅಸ್ತ್ರಗಳೂ ಸಹ ಇದ್ದು ಅವುಗಳು ಒಂದು ರೀತಿಯ ಕ್ಷಿಪಣಿ ಎಂದೇ ಹೇಳಬಹುದು.
ಕ್ಷಿಪಣಿಯನ್ನು ಸಾಮಾನ್ಯವಾಗಿ ಟ್ಯಾಂಕರ್ ಅಥವಾ ದೊಡ್ಡ ಟ್ರಕ್ ಅಥವಾ ಕಟ್ಟಡದ ಮೇಲಿರುವ ಲಾಂಚರ್ ಬಳಸಿ ಹಾರಿಸಲಾಗುತ್ತದೆ.
ಕ್ಷಿಪಣಿ ಸಾಗುವ ಪಥ ಅಥವಾ ಹಾದಿಯನ್ನು ಕ್ಷಿಪಣಿ ಪಥ ಅಥವಾ ಕ್ಷಿಪಣಿ ಮಾರ್ಗ ಎನ್ನುತ್ತಾರೆ.
ಕ್ಷಿಪಣಿಯು ಕೊನೆಯಲ್ಲಿ ಸ್ಪೋಟಗೊಳ್ಳಲು ಸಿಡಿ ತಲೆ ಹಾಗೂ ಚಲಿಸಲು ಬೇಕಾಗುವ ಇಂಧನ ಎರಡನ್ನೂ ಒಳಗೊಂಡಿರುತ್ತದೆ.
ಕಾಲಮಾನ
ಮೂಲ ಭಾಷೆ
ವಿವರ
ಗುರಿಯ ಆಧಾರದ ಮೇಲೆ
- ವಿಮಾನ ಪ್ರತಿರೋಧ ಕ್ಷಿಪಣಿ
- ಹಡಗು ಪ್ರತಿರೋಧ ಕ್ಷಿಪಣಿ
- ಉಪಗ್ರಹ ಪ್ರತಿರೋಧ ಕ್ಷಿಪಣಿ
- ಸಬಮರೀನ್ ಪ್ರತಿರೋಧ ಕ್ಷಿಪಣಿ
- ಟ್ಯಾಂಕ್ ಪ್ರತಿರೋಧ ಕ್ಷಿಪಣಿ
- ಕ್ಷಿಪಣಿ ಪ್ರತಿರೋಧ ಕ್ಷಿಪಣಿ
ಉಡಾಯಿಸುವ ಜಾಗದ ಆಧಾರದ ಮೇಲೆ: ಇಲ್ಲಿ ಮೇಲ್ಮೈ ಅಂದರೆ ನೆಲ ಅಥವಾ ಜಲ ಕೂಡಾ ಆಗಿರಬಹುದು.
- ಮೇಲ್ಮೈ ಇಂದ ಮೇಲ್ಮೈ ಕ್ಷಿಪಣಿ
- ಗಾಳಿಯಿಂದ ಗಾಳಿ ಕ್ಷಿಪಣಿ
- ಮೇಲ್ಮೈ ಇಂದ ಗಾಳಿ ಕ್ಷಿಪಣಿ
- ಗಾಳಿಯಿಂದ ಮೇಲ್ಮೈ ಕ್ಷಿಪಣಿ
ಇದೇ ಅರ್ಥದ ಪದಗಳು
ಮಿಸೈಲ್
ಇದು ಇರುವ ಬೇರೆ ಪದಗಳು
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಮಿಸ್ಸೈಲ್, ರಾಕೆಟ್ ವೆಪನ್
ಹಿಂದಿ: ಕ್ಷಿಪಣಿ, ಪ್ರಕ್ಷೇಪಾಸ್ತ್ರ್, ಅಗ್ನಿಬಾಣ್
ಸಂಸ್ಕೃತ: ಕ್ಷಿಪಣಿ
kshipaNi (Kannada) Meaning in English
kshipaNi = Missile, Rocket Weapon
क्षिपणि (कन्नड) हिंदी में अर्थ
क्षिपणि = रॉकेट , प्रक्षेपास्त्र, अग्निबाण, फेंक मारने का अस्त्र, क्षिपणी
क्षिपणि (कन्नड) संस्कृत अर्थ
क्षिपणि / क्षिपणी