English: RamayaNa (Kannada) = Rama's Journey
हिंदी:रामायण (कन्नड) = रामायण, रामा का यात्रा
संस्कृत: रामायण (कन्नड) = रामायण
ಅರ್ಥ
ನಾಮಪದ:
ರಾಮನ ಪ್ರಯಾಣ, ರಾಮನ ಪಯಣ, ರಾಮ ಚಲಿಸಿದ ಮಾರ್ಗ, ವಾಲ್ಮೀಕಿ ಬರೆದ ರಾಮನ ಚರಿತ್ರೆಯ ಗ್ರಂಥ, ಹಿಂದೂ ಧರ್ಮದ ಪವಿತ್ರ ಗ್ರಂಥ, ಮಹಾಕಾವ್ಯ
ಗುಣವಾಚಕ:
ಕಥೆ
ಉತ್ಪತ್ತಿ
ರಾಮ + ಅಯಣ = ರಾಮಾಯಣ
ರಾಮ ಮತ್ತು ಅಯಣ ಪದಗಳು ಸವರ್ಣ ದೀರ್ಘ ಸಂಧಿಯಿಂದ ಕೂಡಿ ರಾಮಾಯಣ ಪದ ಉಂಟಾಗಿದೆ. ಅ ಕಾರ ಹಾಗೂ ಅ ಕಾರ ಸೇರಿ ಆ ಕಾರ ಆಗಿದೆ.
ರಾಮ ಎಂದರೆ ಅಯೋಧ್ಯೆಯ ರಾಜ ಶ್ರೀರಾಮಚಂದ್ರ.
ಅಯಣ ಎಂದರೆ ಚಲಿಸಿದ ಮಾರ್ಗ ಅಥವಾ ಪ್ರಯಾಣ ಎಂದರ್ಥ. ಇದೇ ಪದ ಸೂರ್ಯನ ಉತ್ತರ ಹಾಗೂ ದಕ್ಷಿಣ ಧ್ರುವದ ಕಡೆಗಿನ ಚಲನೆ/ಪ್ರಯಾಣ ಸೂಚಿಸುವ ಉತ್ತರಾಯಣ (ಉತ್ತರ + ಅಯಣ) / ದಕ್ಷಿಣಾಯಣ (ದಕ್ಷಿಣ + ಅಯಣ) ದಲ್ಲೂ ಕೂಡಾ ಬಳಕೆ ಆಗುತ್ತದೆ.
ಉಪಯೋಗ
- ವಾಲ್ಮೀಕಿ ಮುನಿ ಬರೆದ ರಾಮಾಯಣ ಮಹಾಕಾವ್ಯ.
- ನಾವು ರಾಮಾಯಣದಿಂದ ಕಲಿಯುವ ಪಾಠ ತುಂಬಾ ಇದೆ.
- ಇದೊಳ್ಳೆ ರಾಮಾಯಣ ಆಯ್ತು.
- ನಿಮ್ದೊಳ್ಳೆ ರಾಮಾಯಣ ಮಾರಾಯ್ರೆ.
- ಇದು ಒಳ್ಳೆ ರಾಮಾಯಣ / ಇದೊಳ್ಳೆ ರಾಮಾಯ್ಣ
- ಮನೆ ಮನೆ ರಾಮಾಯಣ / ಮನೆ ಮನೆ ರಾಮಾಯ್ಣ
ಕಾಲಮಾನ
ಮೂಲ ಭಾಷೆ
ವಿವರ
ರಾಮಾಯಣ ಇದು ವಾಲ್ಮೀಕಿ ಮುನಿ ರಚಿಸಿದ ಅಯೋಧ್ಯೆಯ ರಾಜ ಶ್ರೀರಾಮಚಂದ್ರನ ಜೀವನ ಚರಿತ್ರೆ. ಇದು ಸುಮಾರು 24 ಸಾವಿರ ಶ್ಲೋಕ ಇರುವ ಮಹಾಕಾವ್ಯ.
ಶ್ರೀರಾಮನ ಚರಿತ್ರೆಯಾದ ಈ ಗ್ರಂಥದಲ್ಲಿ ಹುಟ್ಟು, ವಿವಾಹ, ವನವಾಸ, ಸೀತೆಯ ಅಪಹರಣ, ವಾನರರ ಭೇಟಿ, ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಪಯಣ, ರಾವಣ ವಧೆ, ಮತ್ತೆ ಅಯೋಧ್ಯೆಗೆ ಬಂದು ಶ್ರೀರಾಮ ಪಟ್ಟಾಭಿಶೇಕದ ವರೆಗೆ ವಿವರವಿದೆ.
ಇಲ್ಲಿ ವನವಾಸದ ಸಮಯದಲ್ಲಿ ಹಾಗೂ ಸೀತೆಯನ್ನು ವಾಪಸ್ ರಾವಣನ ಹಿಡಿತದಿಂದ ಕರೆತರಲು ರಾಮ, ಲಕ್ಷ್ಮಣ ಪಟ್ಟ ಕಷ್ಟ ಕಡಿಮೆ ಏನಲ್ಲ. ಶ್ರೀರಾಮ ಆ ಸಂದರ್ಭದಲ್ಲಿ ವಿವಿಧ ಆಶ್ರಮ, ಕಿಷ್ಕಿಂದೆ, ಲಂಕಾ ತಲುಪಲು ಕ್ರಮಿಸಿದ ದಾರಿ ಎರಡು ಸಾವಿರ ಕಿಮೀ ಮೀರುತ್ತದೆ.
ಅನೇಕ ಭಾರಿ ಕಷ್ಟ ಪಡಿಪಾಟಲನ್ನು ರಾಮ / ಸೀತೆ / ಲಕ್ಷ್ಮಣ ವನವಾಸ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳಿಗೆ ಸಮೀಕರಿಸಿ ಅಂತಹ ಕಥೆಗಳಿಗೆ ರಾಮಾಯಣ ಎನ್ನುವದು ರೂಢಿ.
ಉದಾಹರಣೆಗೆ ಇದೊಳ್ಳೆ ಕಥೆಯಾಯ್ತಲ್ಲ ಬದಲಾಗಿ ಇದೊಳ್ಳೆ ರಾಮಾಯಣ ಆಯ್ತಲ್ಲ, ಮನೆ ಮನೆ ಕಥೆ ಬದಲಾಗಿ ಮನೆ ಮನೆ ರಾಮಾಯಣ. ಇಲ್ಲಿ ರಾಮಾಯಣ ಎಂದರೆ ರಾಮ / ಸೀತೆ / ಲಕ್ಷ್ಮಣ ವನವಾಸ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳ ಹಾಗೇ ಎಂಬರ್ಥ ಮೂಡುತ್ತದೆ.
ಇದೇ ಅರ್ಥದ ಪದಗಳು
ರಾಮಾಯನ
ಇದು ಇರುವ ಬೇರೆ ಪದಗಳು
ವಿಭಕ್ತಿ ಪ್ರತ್ಯಯಗಳು
ವಿಭಕ್ತಿ | ಕಾರಕಾರ್ಥ | ಪ್ರತ್ಯಯ | ವಿಭಕ್ತಿ ಪ್ರತ್ಯಯ ರೂಪ | ಉದಾಹರಣೆ |
ಪ್ರಥಮಾ | ಕರ್ತೃರ್ಥ | ಉ | ರಾಮಾಯಣವು | ರಾಮಾಯಣವು ವಾಲ್ಮೀಕಿ ಮಹರ್ಷಿ ರಚಿಸಿದ ಮಹಾ ಕಾವ್ಯ. |
ದ್ವಿತೀಯಾ | ಕರ್ಮಾರ್ಥ | ಅನ್ನು | ರಾಮಾಯಣವನ್ನು | ರಾಮಾಯಣವನ್ನು ಓದಿ ತಿಳಿಯುವದು ತುಂಬಾ ಇದೆ. |
ತೃತೀಯಾ | ಕರಣಾರ್ಥ | ಇಂದ | ರಾಮಾಯಣದಿಂದ | ರಾಮಾಯಣದಿಂದ ನಾವು ಹಲವು ಪಾಠ ಕಲಿಯಬಹುದು. |
ಚತುರ್ಥಿ | ಸಂಪ್ರಧಾನ | ಗೆ, ಇಗೆ, ಕ್ಕೆ | ರಾಮಾಯಣಕ್ಕೆ | ರಾಮಾಯಣಕ್ಕೆ ತುಂಬಾ ಭಕ್ತಿ ಗೌರವ ಇದೆ. |
ಪಂಚಮಿ | ಅಪಾದಾನ | ದೆಸೆಯಿಂದ | ರಾಮಾಯಣದ ದೆಸೆಯಿಂದ | ರಾಮಾಯಣದ ದೆಸೆಯಿಂದ ನಾವು ರಾಮನ ಚರಿತ್ರೆ ತಿಳಿದೆವು. |
ಷಷ್ಟಿ | ಸಂಬಂಧ | ಅ | ರಾಮಾಯಣದ | ರಾಮಾಯಣದ ಮೊದಲ ಭಾಗ ಬಾಲ ಕಾಂಡ. |
ಸಪ್ತಮಿ | ಅಧಿಕರಣ | ಅಲ್ಲಿ, ಅಲಿ, ಒಳು | ರಾಮಾಯಣದಲ್ಲಿ, ರಾಮಾಯಣದಲಿ, ರಾಮಾಯಣದೊಳು | ರಾಮಾಯಣದಲ್ಲಿ ರಾಮ ವಾನರ ಸೇನೆಯ ಸಹಾಯದಿಂದ ಸೇತುವೆ ನಿರ್ಮಿಸಿದ ವಿವರ ಇದೆ. ರಾಮಾಯಣದಲಿ ಏನಿದೆ ತಿಳಿಯಲು ಓದುವದೇ ಸೂಕ್ತ. ರಾಮಾಯಣದೊಳು ಇದ್ದ ರಾಮನ ಆದರ್ಶದ ಬಗ್ಗೆ ಓದಿ ಮನಸ್ಸು ಪುಳಕಿತಗೊಂಡಿತು. |
ಸಂಬೋಧನೆ | ಅಭಿಮುಖೀಕರಣ | ಆ, ಎ, ಈ, ಇರಾ | ರಾಮಾಯಣವೇ | ರಾಮಯಣವೇ ನಮಗೆ ಒಳ್ಳೆಯ ಕೆಲಸ ಮಾಡಲು ಸ್ಪೂರ್ತಿ. |
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ರಾಮಾಯನ್
ಹಿಂದಿ: ರಾಮಾಯಣ್
ಸಂಸ್ಕೃತ: ರಾಮಾಯಣ
RamayaNa (Kannada) Meaning in English
RamayaNa = Rama's Journey
रामायण (कन्नड) हिंदी में अर्थ
रामायण
रामायण (कन्नड) संस्कृत अर्थ
रामायण
ಈ ಲೇಖನ ಹೇಗನಿಸಿತು? ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.