ಶರವೇಗ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
English: sharavega (Kannada) = very fast
हिंदी : शरवेग (कन्नड) = बहुत तेजी से
संस्कृत : शरवेग (कन्नड) = शरवेग
ಅರ್ಥ
ನಾಮಪದ:
ಬಾಣದಂತೆ ವೇಗವಾಗಿ, ಅತ್ಯಂತ ವೇಗವಾಗಿ, ಫಾಸ್ಟ್ ಆಗಿ
ಉತ್ಪತ್ತಿ
ಶರ ಎಂದರೆ ಸಂಸ್ಕೃತದಲ್ಲಿ ಬಾಣ, ವೇಗ ಎಂದರೆ ಕ್ಷಿಪ್ರವಾಗಿ ಅಥವಾ ಬಿರುಸಾಗಿ ಸಾಗುವದು.
शर + वेग = शरवेग
ಶರ + ವೇಗ = ಶರವೇಗ
ಶರ + ವೇಗ = ಶರವೇಗ
ಉಪಯೋಗ
ನಾಮಪದ:
- ಶರವೇಗದಿಂದ ವೈರಸ್ ಎಲ್ಲ ಕಡೆ ಹರಡಿತು.
- ಆ ರೈಲು ಶರವೇಗದಿಂದ ಚಲಿಸುತಿತ್ತು.
- ವಿಕ್ರಮ ಸೇನ ತಕ್ಷಣ ಕುದುರೆ ಏರಿ ಶರವೇಗದಿಂದ ಹೊರಟು ಹೋದ.
- ಬೆಂಗಳೂರು ನಗರ ಶರವೇಗದಿಂದ ಬೆಳೆಯುತ್ತಿದೆ.
ವಿವರ
ಬಾಣವನ್ನು ಬಿಲ್ಲಿನಿಂದ ಬಿಟ್ಟಾಗ ಗುರಿ ತಲುಪಲು ತುಂಬಾ ಸಮಯ ಬೇಡ. ಆ ಅತಿ ವೇಗದಲ್ಲಿ ಸಾಗುವ ಬಾಣದ ವೇಗಕ್ಕೆ ಶರವೇಗ ಎನ್ನುತ್ತಾರೆ. ಶರ ಎನ್ನುವದು ಬಾಣಕ್ಕೆ ಇನ್ನೊಂದು ಹೆಸರು.
ಶರವೇಗವನ್ನು ಬೇರೆ ವೇಗವಾಗಿ ಚಲಿಸುವ ವಸ್ತು ಅಥವಾ ಅಭಿವೃದ್ದಿಗೆ ಹೋಲಿಸಿ ಹೇಳುತ್ತಾರೆ.
ಕಾಲಮಾನ
-- o --
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
-- o --
ವಿರುದ್ಧ ಅರ್ಥದ ಪದಗಳು
-- o --
ಇದು ಇರುವ ಬೇರೆ ಪದಗಳು
-- o --
ಇದು ಇರುವ ನುಡಿಗಟ್ಟು
-- o --
ಸಂಬಂಧ ಪಟ್ಟ ಪದಗಳು
-- o --
ಆಧಾರಿತ ಪದಗಳು
-- o --
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ವೆರಿ ಫಾಸ್ಟ್
ಹಿಂದಿ: ಬಹುತ್ ತೇಜಿ ಸೇ
ಸಂಸ್ಕೃತ: ಶರವೇಗ
Meaning in English
Very Fast
हिंदी में अर्थ
बहुत तेजी से
संस्कृत अर्थ
शरवेग