ಟ್ರೇಲರ್

ಟ್ರೇಲರ್ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

ಅರ್ಥ

೧. ಪ್ರಚಾರ ಮಾಡಲು ಸಿನಿಮಾ ಅಥವಾ ಧಾರಾವಾಹಿಯಿಂದ ತೆಗೆದು ಜೋಡಿಸಿದ ತುಣುಕುಗಳು, ಸಿನಿಮಾ ಟ್ರೇಲರ್, ಸೀರಿಯಲ್ ಟ್ರೇಲರ್, ಧಾರಾವಾಹಿ ಟ್ರೇಲರ್
೨. ಟ್ರಾಕ್ಟರ್ ಅಥವಾ ಇನ್ಯಾವುದೇ ಗಾಡಿಗೆ ಹಿಂಬಾಗದಲ್ಲಿ ಕಟ್ಟಿ ಎಳೆಯಲ್ಪಡುತ್ತಿರುವ ವ್ಯಾಗನ್ ಅಥವಾ ಕಂಟೇನರ್, ವ್ಯಾನ್ ಟ್ರೇಲರ್, ಟ್ರ್ಯಾಕ್ಟರ್ ಟ್ರೇಲರ್

ಉತ್ಪತ್ತಿ

ಟ್ರೇಲರ್ (Trailer) ಪದದ ಉತ್ಪತ್ತಿ ಇಂಗ್ಲಿಷ್ ನ ಟ್ರೇಲ್ (Trail) ಪದದಿಂದ ಆಗಿದೆ.
ಟ್ರೇಲ್ ಎಂದರೆ ಇಂಗ್ಲಿಷ್ ಅಲ್ಲಿ 
೧. ಯಾರೋ ಹೋಗುವಾಗ ದಾರಿಯಲ್ಲಿ ಬಿಟ್ಟು ಹೋದ ಒಂದು ಅಥವಾ ಹಲವು ಗುರುತು / ಸುಳಿವು. 
೨. ಹಿಂಬಾಗದಿಂದ ಅನುಸರಿಸು
೩. ಕಾಲು ದಾರಿ

ಗಾಡಿಯ ಹಿಂಬಾಗಕ್ಕೆ ಕಟ್ಟಿದ ಡಬ್ಬಿ ಅದನ್ನು ಹಿಂಬಾಗದಿಂದ ಅನುಸರಿಸುವದರಿಂದ ಟ್ರೇಲರ್ ಎನ್ನುತ್ತಾರೆ.
ಬಹಳ ಹಿಂದೆ ಹೊಸ ಅಥವಾ ಮುಂಬರುವ ಸಿನಿಮಾ ಜಾಹಿರಾತನ್ನು ಕೊನೆಯಲ್ಲಿ ತೋರಿಸುತ್ತಿದ್ದರು. ಅದಕ್ಕೆ ಕೂಡಾ ಸಿನಿಮಾ ಟ್ರೇಲರ್ ಅಂತಾ ಹೆಸರು ಬಂತು.

ಉಪಯೋಗ

ನಾಮಪದ (೧)

೧. ಇಂದು ಯೂಟ್ಯೂಬ್ ಅಲ್ಲಿ ಸೂಪರ್ ಸ್ಟಾರ್ ಚತುರಸಿಂಹರ ಸಿನಿಮಾ ಟ್ರೇಲರ್ ಬಿಡುಗಡೆ ಆಯ್ತು.
೨. ಹೊಸ ಧಾರಾವಾಹಿಯೊಂದರ ಟ್ರೇಲರ್ ಟಿವಿಯಲ್ಲಿ ಬರುತ್ತಾ ಇತ್ತು.

ನಾಮಪದ (೨)
೧. ಟ್ರ್ಯಾಕ್ಟರ್ ನ ಟ್ರೇಲರ್ ಅಲ್ಲಿ ತುಂಬಾ ಜನ ಕುಳಿತಿದ್ದರು.

ವಿವರ

ನಾಮಪದ (೧)

ಸಿನಿಮಾದ ಕೊನೆಯ ರೀಲ್ ಅನ್ನು ಟ್ರೇಲರ್ ಎನ್ನುತ್ತಾರೆ. ಬಹಳ ಹಿಂದೆ ಸುಮಾರು ೧೯೧೦ರಲ್ಲಿ ಮುಂದೆ ಬರುವ ಸಿನಿಮಾದ ತುಣುಕುಗಳನ್ನು ಕೊನೆಯ ರೀಲ್ ಅಲ್ಲಿ ತೋರಿಸುತ್ತಿದ್ದರು. ಅದಕ್ಕೆ ಅದನ್ನು ಸಿನಿಮಾ ಟ್ರೇಲರ್ ಎಂದು ಕರೆಯಲಾರಂಭಿಸಿದರು. 

ನಂತರ ಬೇರೆಯ ಪ್ರಚಾರದ ತುಣುಕುಗಳನ್ನು ಸಹ ಅದೇ ಹೆಸರಲ್ಲೇ ಕರೆಯುತ್ತಾರೆ.

ಸಿನಿಮಾ ಅಥವಾ ಧಾರಾವಾಹಿ ಟ್ರೇಲರ್ ನ ಮುಖ್ಯ ಉದ್ದೇಶ ಅದರ ಒಂದು ಪಕ್ಷಿ ನೋಟವನ್ನು ವೀಕ್ಷಕರಿಗೆ ತೋರಿಸಿ ಪೂರ್ತಿ ಸಿನಿಮಾ ಅಥವಾ ಧಾರಾವಾಹಿ ನೋಡುವಂತೆ ಆಕರ್ಷಿಸುವದು. ಪ್ರಚಾರವೇ ಇದರ ಮುಖ್ಯ ಉದ್ದೇಶ.

ನಾಮಪದ (೨)

ಯಾವುದೇ ಗಾಡಿಯ ಹಿಂಭಾಗದಲ್ಲಿರುವ ಬಾಕ್ಸ್ ಅಥವಾ ಕಂಟೇನರ್ ಕೂಡಾ ಟ್ರೇಲರ್ ಎಂದು ಕರೆಯುತ್ತಾರೆ.

ಕಾಲಮಾನ

 ಈ ಪದ ಸುಮಾರು ೧೫೮೦ರಲ್ಲಿ ಪ್ರಥಮ ಬಾರಿಗೆ ದಾಖಲಾಗಿದೆ. ಈ ಪದ ಮೊದಲು ಎಳೆಯಲ್ಪಡುವ ಗಾಡಿಯ ಬಾಕ್ಸ್ ಗೆ ಕರೆಯುತ್ತಿದ್ದರು. ೧೯೧೦ರ ನಂತರ ಸಿನಿಮಾ ತುಣುಕುಗಳಿಗೂ ಇದೇ ಹೆಸರು ಕೊನೆಯಲ್ಲಿ ತೋರಿಸುವ ಕಾರಣ ಬಂತು.

ಮೂಲ ಭಾಷೆ

ಇಂಗ್ಲಿಷ್

ಇದೇ ಅರ್ಥದ ಪದಗಳು

ವಿರುದ್ಧ ಅರ್ಥದ ಪದಗಳು

ಇದು ಇರುವ ಬೇರೆ ಪದಗಳು

ಇದು ಇರುವ ನುಡಿಗಟ್ಟು

ಸಂಬಂಧ ಪಟ್ಟ ಪದಗಳು

ಟೀಸರ್

ಆಧಾರಿತ ಪದಗಳು

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಟ್ರೇಲರ್
ಹಿಂದಿ: ಟ್ರೇಲರ್
ಸಂಸ್ಕೃತ: ಅನುಯಾನ

Meaning in English

Trailer

हिंदी में अर्थ

ट्रेलर

संस्कृत अर्थ

अनुयान
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು