ಅಜರಾಮರ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ: ಎಂದೂ ಮರೆಯಲಾಗದ, ನೆನಪಿನಿಂದ ಎಂದೂ ಹೋಗದ, ಯಾವಾಗಲೂ ಯೌವನದಿಂದ ಕೂಡಿ ಜೀವಿಸುವ, ಎಂದೂ ನಾಶವಾಗದ, ಅವಿಸ್ಮರಣೀಯ
English: ajaraamara (Kannada) = One who never gets old age and death, Always young and alive, Unforgettable
हिंदी: अजरामर (कन्नड) = अजरामर, अविस्मरणीय, जिसे कभी बुढ़ापा और मृत्यु नहीं मिलेगी
संस्कृत: अजरामर (कन्नड) = अजरामर, अविस्मरणीय
ಅರ್ಥ
ಗುಣವಾಚಕ ೧:
ಎಂದೂ ಮರೆಯಲಾಗದ್ದು, ನೆನಪಿನಿಂದ ಎಂದೂ ಹೋಗದ್ದು, ಅವಿಸ್ಮರಣೀಯ
ಗುಣವಾಚಕ ೨:
ಯಾವಾಗಲೂ ಯೌವನದಿಂದ ಕೂಡಿ ಜೀವಿಸುವ, ಎಂದೂ ನಾಶವಾಗದ, ಮುಪ್ಪು ಮತ್ತು ಸಾವು ಬಾರದ, ಯಾರಿಗೆ ಎಂದಿಗೂ ವೃದ್ಧಾಪ್ಯ ಮತ್ತು ಮರಣವನ್ನು ಪಡೆಯುವುದಿಲ್ಲವೋ ಅವರು
ಉತ್ಪತ್ತಿ
ಅಜರ ಎಂದರೆ ಮುಪ್ಪೇ ಇಲ್ಲದ, ಎಂದಿಗೂ ವೃದ್ಧಾಪ್ಯ ಬರದ, ಅದೆಷ್ಟೇ ವರ್ಷ ಕಳೆದರೂ ದೇಹದಲ್ಲಿ ಮುದಿತನದ ಲಕ್ಷಣ ಕಾಣಿಸದ ಎಂದರ್ಥ.
ಅಮರ ಎಂದರೆ ಸಾವೇ ಇರದ, ಚಿರಂಜೀವಿ, ಎಷ್ಟು ವರ್ಷ ಆದರೂ ಸಾಯದ, ಜೀವ ಹೋಗದ ಎಂದರ್ಥ.
ಈ ಅಜರ ಮತ್ತು ಅಮರ ಪದಗಳ ಸಂಗಮ ಅಜರಾಮರ. ಇದು ಸವರ್ಣ ದೀರ್ಘ ಸಂಧಿ. ಇಲ್ಲಿ ಅ ಕಾರ ಮತ್ತು ಅ ಕಾರ ಸೇರಿ ಆ ಕಾರ ಉಂಟಾಗುತ್ತದೆ.
ಅಜರ + ಅಮರ = ಅಜರಾಮರ
ಉಪಯೋಗ
ಗುಣವಾಚಕ ೧: (ಎಂದೂ ಮರೆಯಲಾಗದ್ದು, ನೆನಪಿನಿಂದ ಎಂದೂ ಹೋಗದ್ದು, ಅವಿಸ್ಮರಣೀಯ )
- ಪೂರ್ಣಚಂದ್ರ ತೇಜಸ್ವಿ ಅವರ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಯಾವಾಗಲೂ ಅಜರಾಮರ.
- ಖ್ಯಾತ ನಟ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಹೃದಯದಲ್ಲಿ ಎಂದೂ ಅಜರಾಮರ.
- ಶೇಕ್ಸ್ ಪಿಯರ್ ಅಜರಾಮರ ನಾಟಕಕಾರ.
- ಖ್ಯಾತ ಗಾಯಕರಾದ ಅವರ ನೆನಪು ನಮ್ಮ ಮನಸ್ಸಿನಲ್ಲಿ ಎಂದೂ ಅಜರಾಮರ.
- ಹಿರಿಯ ಶಿಕ್ಷಕರಾದ ಅವರ ಮಾರ್ಗದರ್ಶನ ಎಂದಿಗೂ ಅಜರಾಮರ.
ಗುಣವಾಚಕ ೨: (ಯಾವಾಗಲೂ ಯೌವನದಿಂದ ಕೂಡಿ ಜೀವಿಸುವ, ಎಂದೂ ನಾಶವಾಗದ, ಮುಪ್ಪು ಮತ್ತು ಸಾವು ಬಾರದ)
- ಒಂದೂರಲ್ಲಿ ಒಬ್ಬ ರಾಜನಿದ್ದನು. ಆತನು ಅಜರಾಮರ ಆಗಿದ್ದನು.
ವಿವರ
ಸಂಸ್ಕೃತದಲ್ಲಿ ಜರ ಎಂದರೆ ವೃದ್ದಾಪ್ಯ ಅಥವಾ ವಯಸ್ಸಾದಂತೆ ದೇಹ ಜೀರ್ಣಗೊಂಡು ತನ್ನ ಮೂಲ ಶಕ್ತಿ ಕಳೆದು ಕೊಳ್ಳುವದು ಎಂದರ್ಥ. ಅದೇ ರೀತಿ ಮರ ಎಂದರೆ ಸಾವು ಅಥವಾ ಸಾವಿಗೆ ಸಂಬಂಧಿಸಿದ ಎಂದರ್ಥ.
ಈ ಎರಡೂ ಪದಗಳು "ಅ" ಎಂಬ ಉಪಸರ್ಗ ಮುಂಚೆ ಬರುವದರಿಂದ ವಿರುದ್ಧ ಅರ್ಥ ಪಡೆಯುತ್ತವೆ.
ಅಜರ ಎಂದರೆ ವೃದ್ದಾಪ್ಯ ಇಲ್ಲದಿರುವ, ಎಂದೂ ಮುಪ್ಪಾಗದ, ಯೌವನವನ್ನು ಎಂದೂ ಕಳೆದು ಕೊಳ್ಳದ ಎಂಬರ್ಥ ಪಡೆಯುತ್ತದೆ.
ಅಮರ ಎಂದರೆ ಎಂದೂ ಸಾವು ಸಂಭವಿಸದ, ಎಂದೂ ಜೀವ ಕಳೆದು ಕೊಳ್ಳದ, ಚಿರಾಯು, ಚಿರಂಜೀವಿ ಎಂಬರ್ಥ ಪಡೆಯುತ್ತದೆ.
ಅಜರಾಮರ ಪದ ಈ ಎರಡೂ ಪದ ಜೋಡಣೆಯಿಂದ ಉಂಟಾಗಿದೆ.
ಅಜರ + ಅಮರ = ಅಜರಾಮರ
ಅಜರಾಮರ ಎಂದರೆ ಎಂದೂ ಮರೆಯಲಾಗದ, ಎಂದೂ ನಾಶವಾಗದ, ತನ್ನ ಹೊಸತನ ಕಳೆದು ಕೊಳ್ಳದ, ಮರೆಯಲಾಗದ, ಮುಪ್ಪು ಹಾಗೂ ಸಾವು ಎರಡೂ ಬಾರದ ಎಂದು ಅರ್ಥ.
ಈ ಪದ ಇಂದು ಅವಿಸ್ಮರಣೀಯ, ಎಂದೂ ಮರೆಯಲಾಗದ, ಎಂದೆಂದಿಗೂ ನೆನಪಲ್ಲಿ ಇರುವ ಎಂಬರ್ಥದಲ್ಲಿ ಜಾಸ್ತಿ ಬಳಸಲಾಗುತ್ತದೆ.
ಕಾಲಮಾನ
ಇದು ತುಂಬಾ ಹಳೆಯ ಸಂಸ್ಕೃತ ಪದ ಆಗಿದೆ.
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
ಅವಿಸ್ಮರಣೀಯ
ಸಂಬಂಧ ಪಟ್ಟ ಪದಗಳು
ಜರ, ಮರ, ಅಜರ, ಅಮರ
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಅನ್ ಫೊರ್ಗೆಟ್ಟಬಲ್, ಆಲ್ವೇಯ್ಸ್ ಯಂಗ್ ಎಂಡ್ ಅಲೈವ್
ಹಿಂದಿ: ಅಜರಾಮರ್, ಅವಿಸ್ಮರಣೀಯ್
ಸಂಸ್ಕೃತ: ಅಜರಾಮರ, ಅವಿಸ್ಮರಣೀಯ
ajaraamara (Kannada) Meaning in English
One who never gets old age and death, Always young and alive, Unforgettable
अजरामर (कन्नड) - हिंदी में अर्थ
अजरामर (कन्नड) - संस्कृत अर्थ
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.