ಕಂಕುಳ / ಕಂಕುಳು / ಕವುಂಕಳ್

ಕಂಕುಳ
ಪದಮಂಜರಿ.ಕಾಂ  

ಕಂಕುಳ / ಕಂಕುಳು / ಕವುಂಕುಳ್ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಬಾಹುಮೂಳ, ಬಗಲು

English: KankuLu / Kankula / kavunkul (Kannada) = arm pit, under arms

हिंदी: कंकुळु  / कंकुळ /  (कन्नड) = बगल

संस्कृत: कंकुळु  / कंकुळ (कन्नड) = कक्ष, बाहुमूल, दोर्मूल

ಅರ್ಥ

ನಾಮಪದ:

ಕೈ ಮತ್ತು ದೇಹದ ನಡುವಿನ ಕೆಳಗಿನ ಸಂಧಿ, ತೋಳು ಹಾಗೂ ದೇಹದ ನಡುವಿನ ಜೋಡಣೆಯ ಕೆಳಗಿನ ಜಾಗ, ಬಾಹು ಮತ್ತು ದೇಹ ಜೋಡಣೆಯ ಕೆಳ ಮೂಲೆ. 

ಉತ್ಪತ್ತಿ

ಕವುಂಕಳ್ ಎಂಬುದು ಕೈ ಮತ್ತು ದೇಹ ಜೋಡಣೆ ಆಗುವ ಕೆಳ ಮೂಲೆ ಜಾಗ. ಇದು ಹಳೆಗನ್ನಡ ಪದ. ಹಳೆಗನ್ನಡದಲ್ಲಿ ಬಾಹುಮೂಳ ಎಂಬ ಪದ ಕೂಡಾ ಇತ್ತು. ಅದು ಸಂಸ್ಕೃತದ ಬಾಹುಮೂಲ ಪದದ ತದ್ಭವ ಪದ.

ಕವುಂಕುಳ್ ಪದವು ಅಪಬೃಂಶವಾಗಿ ಕಂಕುಳ ಅಥವಾ ಕಂಕುಳು ಎಂದು ಕಾಲ ಕ್ರಮೇಣ ಆಯ್ತು.

ಉಪಯೋಗ

ನಾಮಪದ:

  • ಆತನ ಕಂಕುಳಲ್ಲಿ ಕೊಡೆ ಇತ್ತು.
  • ನಟಿ ಅಭಿಮಾನಿಗಳಿಗೆ ಕೈ ಬೀಸುವಾಗ ಕಾಣಬಾರದೆಂದು ಕಂಕುಳಿನ ಕೂದಲನ್ನು ತೆಗೆಯುತ್ತಿದ್ದಳು.
  • ನಿಮ್ಮ ಕಂಕುಳು ಕಪ್ಪಿದ್ದರೆ ಇಲ್ಲಿದೆ ಸುಲಭ ಮನೆ ಮದ್ದು.

ವಿವರ


ಚಿತ್ರಕೃಪೆ: engin akyurt on Unsplash

ಕೈ ಮತ್ತು ದೇಹದ ನಡುವಿನ ಜೋಡಣಾ ಸ್ಥಾನವನ್ನು ಹಳೆಗನ್ನಡ ಕಾಲದಲ್ಲಿ ಕವುಂಕುಳ್ ಎನ್ನುತ್ತಿದ್ದರು. ಕ್ರಮೇಣ ಆ ಪದ ಅಪಬೃಂಶವಾಗಿ ಕಂಕುಳ ಅಥವಾ ಕಂಕುಳು ಆಯ್ತು.

ಅಷ್ಟೇ ಅಲ್ಲ ಆಡು ಭಾಷೆಗಳಲ್ಲಿ ಈ ಪದ ಇನ್ನೂ ಹಲವು ರೂಪ ಪಡೆದು ಕೊಂಡಿದೆ. ಕಂಕ್ಳು / ಕಂಕಳ್ / ಕಂಕುಳು / ಕೊಂಕಳು / ಕೊಂಕ್ಳು / ಕೊಂಕುಳ ಹೀಗೆ ಹಲವು ರೂಪದಲ್ಲಿ ಹೇಳಲ್ಪಡುತ್ತದೆ.

ಕಾಲಮಾನ

ಹಳೆಗನ್ನಡದ ಕಾಲದಲ್ಲಿ ಈ ಪದ ಬಳಕೆ ಬಂತು ಎನ್ನ ಬಹುದು. ಡಾ॥ ಪಿವಿ ನಾರಾಯಣ್ ಅವರ ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥ ಸಂಕಲನ) ಪುಸ್ತಿಕೆಯಲ್ಲಿ ನೇಮಿನಾಪು ಎಂಬ ಗ್ರಂಥದಲ್ಲಿ ಈ ಪದ ಪ್ರಸ್ತಾಪ ಆಗಿರುವದನ್ನು ಉಲ್ಲೇಖಿಸುತ್ತಾರೆ.

ಮೂಲ ಭಾಷೆ

ಹಳೆಗನ್ನಡ

ಇದೇ ಅರ್ಥದ ಪದಗಳು

ಬಗಲು

ಏಕ ವಚನ / ಬಹು ವಚನ

ಸಾಮಾನ್ಯವಾಗಿ ಕಂಕುಳ ಪದ ವನ್ನು ಒಂದು ಅಥವಾ ಎರಡೂ ಕಂಕುಳಗಳಿಗೆ ಉದ್ದೇಶಿಸಿ ಹೇಳುವದು ರೂಡಿ. ಆದರೆ ಇದರ ಬಹುವಚನ ರೂಪ ಕಂಕುಳಗಳು / ಕಂಕುಳುಗಳು.

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಆರ್ಮ್ ಪಿಟ್, ಅಂಡರ್ ಆರ್ಮ್ಸ್
ಹಿಂದಿ: ಬಗಲ್
ಸಂಸ್ಕೃತ: ಬಾಹುಮೂಲ, ದೊರ್ಮೂಲ, ಕಕ್ಷ

kankuLu / kankula / kavunkul (Kannada) Meaning in English

armpit, under arms

कंकुळु / कंकुळ / कवुंकुळ (कन्नड) - हिंदी में अर्थ

बगल

कंकुळु / कंकुळ / कवुंकुळ (कन्नड) - संस्कृत अर्थ

कक्ष, बाहुमूल, दोर्मूल

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು