ಎಲ್ಲೆ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ: ಮಿತಿ, ಸೀಮೆ, ಗಡಿ, ಸರಹದ್ದು, ಮೇರೆ, ಬೌಂಡರಿ, ಲಿಮಿಟ್, ಸೀಮೆ ಗುರುತಿಸುವ, ಗಡಿ ಸೂಚಿಸುವ, ಸರಹದ್ದು ತಿಳಿಸುವ
English: elle (Kannada) = a limit, a boundary
हिंदी: एल्ले (कन्नड) = सीमा, हद
संस्कृत: एल्ले (कन्नड) = सीमा, मर्या
ಅರ್ಥ
ನಾಮಪದ:
ಮಿತಿ, ಸೀಮೆ, ಗಡಿ, ಸರಹದ್ದು, ಮೇರೆ, ಬೌಂಡರಿ, ಲಿಮಿಟ್
ಗುಣವಾಚಕ:
ಸೀಮೆ ಗುರುತಿಸುವ, ಗಡಿ ಸೂಚಿಸುವ, ಸರಹದ್ದು ತಿಳಿಸುವ
ಉತ್ಪತ್ತಿ
ತಮಿಳಿನಲ್ಲಿ ಎಲ್ಲೈ ಎಂದರೆ ಸೀಮೆ, ಗಡಿ ಎಂದರ್ಥ. ಆ ಪದದ ಅಪಬೃಂಶ ಎಲ್ಲೆ ಎನ್ನಬಹುದು.
ಉಪಯೋಗ
ನಾಮಪದ:
ಈ ಆಕಾಶಕ್ಕೆ ಯಾವುದೇ ಎಲ್ಲೆ ಇಲ್ಲ.
ಕೆಲಸಗಾರರು ತಾವು ಹಾಕಿದ ಎಲ್ಲೆ ಗೆರೆ ದಾಟದಂತೆ ಎಚ್ಚರಿಕೆ ನೀಡಿದ್ದರು.
ಆ ರಾಜಕಾರಣಿಯ ಬ್ರಷ್ಟಾಚಾರಕ್ಕೆ ಎಲ್ಲೆಯೇ ಇರಲಿಲ್ಲ.
ಗುಣವಾಚಕ:
ಗಡಿಪಾರು ಮಾಡಲ್ಪಟ್ಟ ಆ ಕುಟುಂಬ ಊರ ಹೊರಗಿನ ಎಲ್ಲೆ ಕಲ್ಲು ದಾಟಿ ಆಚೆ ಇರಬೇಕಿತ್ತು. (ಗಡಿ ಕಲ್ಲು)
ಜಾತಿ ಧರ್ಮಗಳ ಎಲ್ಲೆ ಮೀರಿದ ವ್ಯಕ್ತಿ ಚತುರ ಸಿಂಹ ಆಗಿದ್ದರು. (ಆ ಮಿತಿಯನ್ನು ಮೀರಿದ)
ಎಲ್ಲೆ ಮೀರಿದ ಕೀಟಾಣು ಈಗ ಮನೆ ಮನೆಗೂ ಹರಡಿದೆ. (ಮಿತಿ ಮೀರಿದ)
ವಿವರ
ಎಲ್ಲೆ ಎಂದರೆ ಒಂದು ಪ್ರದೇಶದ ವಾಸ್ತವಿಕ ಗಡಿ ಅಥವಾ ಸೀಮೆ ಎನ್ನಬಹುದು. ಅಥವಾ ಅಮೂರ್ತವಾದ ಗಡಿ ಅಥವಾ ಮಿತಿ.
ಎಲ್ಲೆ ಕಲ್ಲು ಎಂದರೆ ಗಡಿ ಕಲ್ಲು, ಬೌಂಡರಿ ಸ್ಟೋನ್. ಇದನ್ನು ಒಂದು ಊರಿನ ಅಥವಾ ಜಾಗದ ಗಡಿ, ಸೀಮೆಯನ್ನು ಗುರುತಿಸಲು ಹಾಕುತ್ತಾರೆ.
ಎಲ್ಲೆ ಕಟ್ಟುವದು ಎಂದರೆ ಒಂದು ಮಿತಿಯನ್ನು ಮೀರದಂತೆ ತಡೆ ಹಿಡಿಯುವದು. ಅಥವಾ ಒಂದು ಜಾಗಕ್ಕೆ ಗಡಿಯನ್ನು ಗುರುತಿಸುವದು, ಜಾಗದ ಬೌಂಡರಿಯನ್ನು, ಸೀಮಾ ರೇಖೆಯನ್ನು ಗುರುತಿಸಿ ಅಲ್ಲಿ ಬರದಂತೆ ತಡೆಯುವದು. ಒಂದು ಕೆಲಸಕ್ಕೆ ಮಿತಿಯನ್ನು ಹಾಕಿ ಅದನ್ನು ಮೀರದಂತೆ ತಡೆಯುವದು. ಇದಕ್ಕೆ ನಿರ್ಬಂಧ ಅಥವಾ ರಿಸ್ಟ್ರಿಕ್ಷನ್ ಅಂತಾನೂ ಹೇಳಬಹುದು.
ಉದಾ: ಮಹಾರಾಜ ದುಷ್ಟಸೇನ ಹಾಕಿದ ಎಲ್ಲೆ ಕಟ್ಟು ಪ್ರಜೆಗಳನ್ನು ಉಸಿರು ಕಟ್ಟುವಂತೆ ಮಾಡಿತು.
ಟಿವಿ, ಸಿನಿಮಾ ನೋಡದಂತೆ ಮಕ್ಕಳಿಗೆ ಯಾವುದೇ ಎಲ್ಲೆ ಕಟ್ಟು ಇರಲಿಲ್ಲ.
ಎಲ್ಲೆ ಮೀರುವದು ಎಂದರೆ ಲಿಮಿಟ್ ಕ್ರಾಸ್ ಮಾಡುವದು, ಮಿತಿಯನ್ನು ಮೀರುವದು, ತೀರಾ ಹೆಚ್ಚಾಗುವದು ಎಂದರ್ಥ ಇದೆ.
ಉದಾ: ಅತ್ತೆ ಸೊಸೆ ಜಗಳ ಅಂದು ಎಲ್ಲೆ ಮೀರಿ ಹೋಗಿತ್ತು.
ಎಲ್ಲೆ ಮೀರಿ ಬೆಳೆದ ನಗರ ಇಂದು ಕಲುಷಿತ ವಾತಾವರಣದಿಂದ ಅಸಹನೀಯ ಆಗಿದೆ.
ಎಲ್ಲೆ ಗೆರೆ ಎಂದರೆ ಸೀಮಾ ರೇಖೆ, ದೇಶ, ರಾಜ್ಯ, ಊರು, ಜಾಗದ ಗಡಿ ರೇಖೆಯನ್ನು ಎಲ್ಲೆ ಗೆರೆ ಎನ್ನಬಹುದು.
ಉದಾ: ಅಣ್ಣ ತಮ್ಮಂದಿರು ತಮ್ಮ ಪಾಲಿನ ಜಾಗವನ್ನು ಸರಿಯಾಗಿ ಹಂಚಿ ಕೊಂಡು ಸರ್ವೇ ಮಾಡಿಸಿ ಎಲ್ಲೆ ಗೆರೆ ಹಾಕಿಕೊಂಡರು.
ಎಲ್ಲೆಯೇ ಎಂಬ ರೂಪದಲ್ಲಿ ಕೂಡಾ ಈ ಪದವನ್ನು ಬಳಸಬಹುದು.
ಈ ಮುಂದಿನ ವ್ಯಾಕ್ಯಗಳ ಅರ್ಥ ಒಂದೇ.
- ಬಹುಮಾನ ಬಂದಾಗ ನನ್ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
- ಬಹುಮಾನ ಬಂದಾಗ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
ಕಾಲಮಾನ
ಮೂಲ ಭಾಷೆ
ಇದೇ ಅರ್ಥದ ಪದಗಳು
ಇದು ಇರುವ ಬೇರೆ ಪದಗಳು
ಬೇರೆ ಭಾಷೆಗಳಲ್ಲಿ
Elle (Kannada) - Meaning in English
एल्ले (कन्नड) - हिंदी में अर्थ
सीमा, हद
एल्ले (कन्नड) - संस्कृत अर्थ
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.