ಕಾಲಹರಣ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ: ಹೊತ್ತು ಕಳೆಯುವದು, ಸಮಯ ಹಾಳು ಮಾಡುವದು, ಕಾಲ ಕ್ಷೇಪ, ಟೈಂ ಪಾಸ್, ಸಮಯ ವ್ಯರ್ಥ ಮಾಡುವದು, ತಡ ಮಾಡುವದು, ದಿನ ಮುಂದೆ ಹಾಕುತ್ತಾ ಇರುವದು, ವಿಳಂಬ
English: kaalaharaNa (Kannada) = Time pass, Delay, Procastination
हिंदी: कालहरण (कन्नड) = टाइम पास, समय बिताना, विलंब
संस्कृत: कालहरण (कन्नड) = कालक्षेपम् , समयस्य यापनम्, विलम्ब्, कालयाप
ಅರ್ಥ
ನಾಮಪದ ೧:
ಹೊತ್ತು ಕಳೆಯುವದು, ಸಮಯ ಹಾಳು ಮಾಡುವದು, ಕಾಲ ಕ್ಷೇಪ, ಟೈಂ ಪಾಸ್, ಸಮಯ ವ್ಯರ್ಥ ಮಾಡುವದು, ಯಾವುದೇ ಉಪಯುಕ್ತ ಕೆಲಸ ಮಾಡದೇ ಕಾಲ ಕಳೆಯುವದು
ನಾಮಪದ ೨:
ತಡ ಮಾಡುವದು, ದಿನ ಮುಂದೆ ಹಾಕುತ್ತಾ ಇರುವದು, ವಿಳಂಬ ಮಾಡುವದು
ಉತ್ಪತ್ತಿ
ಈ ಪದ ಸಂಸ್ಕೃತದ ಕಾಲ ಹಾಗೂ ಹರಣ ಪದದಿಂದ ಉಂಟಾಗಿದೆ.
ಕಾಲ + ಹರಣ = ಕಾಲಹರಣ
ಕಾಲ ಎಂದರೆ ಸಂಸ್ಕೃತದಲ್ಲಿ ಸಮಯ, ಹೊತ್ತು ಎಂದರ್ಥ.
ಹರಣ ಎಂದರೆ ನಾಶ ಮಾಡುವದು, ಹಾಳು ಮಾಡುವದು.
ಕಾಲಹರಣ ಎಂಬ ಪದ ಈ ಎರಡು ಪದಗಳ ಸಂಗಮದಿಂದ ಆಗಿದೆ.
ಉಪಯೋಗ
- ನಮ್ಮ ಕಂಪನಿಗೆ ಕಾಲಹರಣ ಮಾಡುವ ಕೆಲಸಗಾರರು ಬೇಡ.
- ಮೊಬೈಲ್ ನೋಡುತ್ತಾ ವಿದ್ಯಾರ್ಥಿ ಮಾಡಿದ ಕಾಲಹರಣ. ಪಾಲಕರಿಗೆ ದೂರು.
- ನಿಯೋಜಿಸಿದ ಟೀಮ್ ನಿಂದ ಬರೀ ಚರ್ಚೆಯಲ್ಲೇ ಕಾಲಹರಣ.
- ವೃಥಾ ಕಾಲಹರಣ ಮಾಡುವದು ತಪ್ಪು.
- ಸುಮ್ಮನೆ ಓದದೇ ಕಾಲಹರಣ ಮಾಡಿ ಫೇಲಾದ ಕಾಲೇಜು ವಿದ್ಯಾರ್ಥಿಗಳು.
- ಕಾಲಹರಣ ಮಾಡದೇ ಮುಖ್ಯಮಂತ್ರಿಗಳ ಆದೇಶ ಪಾಲಿಸಲು ಸೂಚನೆ.
- ಸಂಬಳ ನೀಡದೇ ಕಾಲಹರಣ ಮಾಡುತ್ತಿದ್ದಾರೆಂದು ಬ್ಯಾಂಕ್ ಸಿಬ್ಬಂದಿ ದೂರು.
- ನಾವು ಯಾವುದೇ ರೀತಿಯ ಕಾಲಹರಣ ಮಾಡಿಲ್ಲ ತನಿಖೆ ನಡೆಯುತ್ತಾ ಇದೆ ಎಂದು ಡಿಸಿ ತಿಳಿಸಿದರು.
ವಿವರ
ಕಾಲ ಎಂದರೆ ಸಮಯ, ಹೊತ್ತು, ವೇಳೆ ಅಥವಾ ಟೈಂ.
ಹರಣ ಎಂದರೆ ನಾಶ ಮಾಡುವದು, ಕಿತ್ತು ಕೊಳ್ಳುವದು, ಹಾಳು ಮಾಡುವದು.
ಕಾಲ + ಹರಣ = ಕಾಲಹರಣ
ಕಾಲಮಾನ
ಮೂಲ ಭಾಷೆ
ಇದೇ ಅರ್ಥದ ಪದಗಳು
ಬೇರೆ ಭಾಷೆಗಳಲ್ಲಿ
kaalaharaNa (Kannada) Meaning in English
Time pass, Delay, Procastination
कालहरण (कन्नड) - हिंदी में अर्थ
टाइम पास, समय बिताना, विलंब
कालहरण (कन्नड) - संस्कृत अर्थ
कालक्षेपम् , समयस्य यापनम्, विलम्ब्, कालयाप
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.