ಕೋರಿಕೆ / ಕೋಱಿಕೆ

ಕೋರಿಕೆ
ಪದಮಂಜರಿ.ಕಾಂ  

ಕೋರಿಕೆ / ಕೋಱಿಕೆ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

English: korike (Kannada) = requesting, a request, desire

हिंदी: कोरिके (कन्नड) = निवेदन, प्रणिधि

संस्कृत: कोरिके (कन्नड) = प्रणिधि, याचना

ಅರ್ಥ

ನಾಮಪದ:

೧. ವಿನಂತಿ, ಮನವಿ, ಬಿನ್ನಹ, ಕೇಳಿ ಕೊಳ್ಳುವದು, ಬೇಡಿಕೆ

೨. ಬಯಕೆ, ಆಸೆ

೩. ಹಾರೈಕೆ

ಉತ್ಪತ್ತಿ

ಕೋರು ಮತ್ತು ಕೋರಿಕ್ಕೈ ಎಂದರೆ ತಮಿಳಿನಲ್ಲಿ ವಿನಂತಿ, ಬೇಡಿಕೆ, ಕೇಳಿ ಕೊಳ್ಳುವದು ಎಂದರ್ಥ. ಈ ಪದ ತಮಿಳಿನಿಂದ ಬಂದಿದೆ.

ಕೋರಿಕೆ ಇದು ಕೋರಿಕ್ಕೈ ಎಂಬ ತಮಿಳು ಪದದ ಅಪಬೃಂಶ ಪದ.

ಕೋರಿಕ್ಕೈ (ತಮಿಳು) = ಕೋರಿಕೆ (ಕನ್ನಡ)

ಉಪಯೋಗ

ನಾಮಪದ ೧: (ವಿನಂತಿ, ಮನವಿ, ಬಿನ್ನಹ, ಕೇಳಿ ಕೊಳ್ಳುವದು, ಬೇಡಿಕೆ)

  • ಜನಪ್ರಿಯ ನಟ ಚತುರಸಿಂಹರ ಅವರಿಂದ ಹೊಟ್ಟೆ ಪಕ್ಷದ ಅಭ್ಯರ್ಥಿಗೆ ಮತ ಕೋರಿಕೆ. 
  • ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರಕ್ಕೆ ಕೋರಿಕೆ.
  • ಭಕ್ತನ ಕೋರಿಕೆ ದೇವರ ತಲುಪಿ ಎಲ್ಲವನ್ನೂ ಭಗವಂತ ಅನುಗ್ರಹಿಸಿದ.

  • ರಾಜ್ಯದ ಕೋರಿಕೆ ಮೇರೆಗೆ ಕೇಂದ್ರ ಸಹಾಯ ಧನ ಬಿಡುಗಡೆ ಮಾಡಿತು.

  • ಗ್ರಾಮಕ್ಕೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ನೀಡಲು ಕೋರಿಕೆ.

ನಾಮಪದ ೨: (ಬಯಕೆ, ಆಸೆ)

  • ಆ ಅಭಿಮಾನಿ ಒಮ್ಮೆ ತನ್ನ ಮೆಚ್ಚಿನ ನಟಿಯನ್ನು ನೋಡಬೇಕೆಂದು ಕೋರಿಕೆ ಇಟ್ಟಿದ್ದ.
  • ತಾಯಿಯ ಕೋರಿಕೆ ಈಡೇರಿಸಿದ ಮಗ.

ನಾಮಪದ ೩: (ಹಾರೈಕೆ)
  • ಪ್ರಧಾನಮಂತ್ರಿಯ ಜನ್ಮದಿನದಂದು ಪ್ರಜೆಗಳಿಂದ ಶುಭ ಕೋರಿಕೆ.

ವಿಭಕ್ತಿ ಪ್ರತ್ಯಯ ಅನುಸಾರ

  • ನಾವು ಮುಖ್ಯಮಂತ್ರಿಗಳ ಬಳಿ ಕೇಳಿದ ಕೋರಿಕೆಯು ನೆನೆಗುದಿಗೆ ಬಿದ್ದಿದೆ. (ಪ್ರಥಮಾ ವಿಭಕ್ತಿ - ಕರ್ತ್ರಾರ್ಥ)
  • ಇಂತಹ ಕೋರಿಕೆಯನ್ನು ಮಾಡಬಾರದು. (ದ್ವಿತೀಯ ವಿಭಕ್ತಿ - ಕರ್ಮಾರ್ಥ)
  • ನಾನು ಬೇರೆ ದೇಶಗಳಿಗೆ ಮಾಡಿದ ಕೋರಿಕೆಯಿಂದ ನಮಗೆ ನೆರವು ಸಿಕ್ಕಿದೆ ಎಂದು ಪ್ರಧಾನಿ ತಿಳಿಸಿದರಿ. (ತೃತೀಯ ವಿಭಕ್ತಿ - ಕರಣಾರ್ಥ)
  • ಜನರ ಕೋರಿಕೆಗೆ ಮನ್ನಣೆ ಸಿಗಲಿಲ್ಲ. (ಚತುರ್ಥಿ ವಿಭಕ್ತಿ - ಸಂಪ್ರಧಾನ)
  • ನನ್ನ ಕೋರಿಕೆಯ ದೆಸೆಯಿಂದ ನಿನಗೆ ಕ್ಷಮೆ ದೊರೆಯಿತು. ( ಪಂಚಮಿ ವಿಭಕ್ತಿ - ಅಪಾದಾನ)
  • ಆತನ ಕೋರಿಕೆಯ ಈಡೇರಿಸಲಾಯ್ತು. (ಷಷ್ಠಿ ವಿಭಕ್ತಿ - ಸಂಬಂಧ)
  • ಆ ಕೋರಿಕೆಯಲ್ಲಿ ಯಾವುದೇ ತಪ್ಪಿರಲಿಲ್ಲ. (ಸಪ್ತಮೀ ವಿಭಕ್ತಿ - ಅಧೀಕರಣ)

      ವಿವರ

      ಕೋರಿಕೆ ಅನ್ನುವದು ನಾಮಪದ. ಯಾರಾದರೂ ಏನನ್ನಾದರೂ ಬೇಡಿ ಕೊಂಡರೆ, ಬಯಸಿದರೆ ಆ ಬಯಕೆಗೆ, ಬೇಡಿಕೆಗೆ ಕೋರಿಕೆ ಎನ್ನಬಹುದು.

      ಗಮನಿಸಿ ಕೋರಿಕೆ ಅನ್ನುವದು ಬೇಡಿ ಕೊಳ್ಳುವ ಕ್ರಿಯೆಯನ್ನು ಸೂಚಿಸುವದಿಲ್ಲ. ಬದಲಾಗಿ ಏನನ್ನು ಬೇಡಿಕೊಂಡಿದ್ದಾರೆ ಆ ಬೇಡಿಕೆಯನ್ನು ಸೂಚಿಸುತ್ತದೆ.

      ಕೋರುವದು, ಕೋರಿಕೊಳ್ಳುವದು, ಕೋರಿದರು, ಕೋರು ಇವೆಲ್ಲ ಕೋರ್ ಬೇರು ಪದದಿಂದಲೇ ಆದ ಪದಗಳು.

      ಮೂಲ ಭಾಷೆ

      ತಮಿಳು

      ಇದೇ ಅರ್ಥದ ಪದಗಳು

      ವಿನಂತಿ, ಮನವಿ, ಬಿನ್ನಹ, ಬೇಡಿಕೆ

      ವಿರುದ್ಧ ಅರ್ಥದ ಪದಗಳು

      ಕೋರಿಕೆ ಇರಲಿಲ್ಲ, ಕೋರಿಕೆ ಇಲ್ಲ, ಕೋರಿಕೆ ಇಲ್ಲದಿರುವದು

      ಏಕ ವಚನ / ಬಹು ವಚನ

      ಕೋರಿಕೆ ಎಂಬುದು ಏಕ ವಚನ. ಒಂದಕ್ಕಿಂತ ಹೆಚ್ಚು ಬೇಡಿಕೆ ಇದ್ದರೆ ಕೋರಿಕೆಗಳು ಎಂಬ ಬಹು ವಚನ ಬಳಸಬಹುದು.

      ಇದು ಇರುವ ಬೇರೆ ಪದಗಳು

      ಕೋರಿಕೆ ವರ್ಗಾವಣೆ, ಶುಭ ಕೋರಿಕೆ, ಕೋರಿಕೆ ಮೇರೆಗೆ

      ಬೇರೆ ಭಾಷೆಗಳಲ್ಲಿ

      ಇಂಗ್ಲಿಷ್: ರಿಕ್ವೆಸ್ಟ್
      ಹಿಂದಿ: ನಿವೇದನ, ಪ್ರಣಿಧಿ
      ಸಂಸ್ಕೃತ: ಪ್ರಣಿಧಿ, ಯಾಚನಾ

      korike (Kannada) Meaning in English

      requesting, a request, desire

      कोरिके (कन्नड) - हिंदी में अर्थ

      निवेदन, प्रणिधि

      कोरिके (कन्नड) - संस्कृत अर्थ

      प्रणिधि, याचना

      ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

      ರಾಜೇಶ ಹೆಗಡೆ

      ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

      ಕಾಮೆಂಟ್‌‌ ಪೋಸ್ಟ್‌ ಮಾಡಿ

      ನವೀನ ಹಳೆಯದು