ಕೋವಿದ
ಪದಮಂಜರಿ.ಕಾಂ
ಕೋವಿದ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
{tocify} $title={ ವಿಷಯ ಸೂಚಿ}
ಅರ್ಥ: ವಿದ್ವಾಂಸ
English: Kovida (Kannada) = Scholar, Skilled, Expert, Proficient
हिंदी: कोविद (कन्नड) = विद्वान
संस्कृत: कोविद (कन्नड) = विद्वान
ಅರ್ಥ
ನಾಮಪದ:
ವಿದ್ವಾಂಸ, ಯಾವುದಾದರೂ ವಿಷಯದಲ್ಲಿ ಪಾಂಡಿತ್ಯ ಉಳ್ಳವ, ಮಹಾ ಜ್ಞಾನಿ
ಉತ್ಪತ್ತಿ
ಕೋವಿದ ಎಂದರೆ ಸಂಸ್ಕೃತದಲ್ಲಿ ಅನುಭವ ಉಳ್ಳವರು, ಪರಿಣಿತ, ಕಲಿತವನು, ಕೌಶಲ ಉಳ್ಳವ ಎಂಬರ್ಥ ಇದೆ. ಇದೇ ತತ್ಸಮ ಪದ ಕನ್ನಡದಲ್ಲಿ ಅದೇ ಅರ್ಥದಲ್ಲಿ ಬಳಕೆ ಆಗುತ್ತಿದೆ.
ಉಪಯೋಗ
ನಾಮಪದ:
- ಬಹುಭಾಷಾ ಕೋವಿದ ಗುಣವಂತರು ಮಾತನಾಡಿದರೆ ಅದರಲ್ಲಿ ಜ್ಞಾನದ ಧಾರೆ ಹರಿಯುತ್ತಿತ್ತು.
- ನಾಟ್ಯ ಕೋವಿದ ನಟರಾಜರವರು ಯುವ ಜನತೆಗೆ ನಾಟ್ಯ ಶಾಲೆ ಆರಂಭಿಸಿದ್ದಾರೆ.
- ವೈದ್ಯರಾದ ನಂಜುಂಡಪ್ಪನವರು ಆಲೋಪತಿ ವೈದ್ಯಶಾಸ್ತ್ರ ಕೋವಿದರು.
ವಿವರ
ಕೋವಿದ ಅಥವಾ ಕೋವಿದರು ಎಂದರೆ ಪರಿಣಿತರು, ಪಾರಂಗತರು, ವಿದ್ವಾಂಸರು.
ಇತ್ತೀಚೆಗೆ ಕೆಲವರು ಕೋವಿಡ್ ಅಥವಾ ಕೋವಿಡ್-೧೯ ರ ಬದಲಾಗಿ ಕೋವಿದ್ / ಕೋವಿದ / ಕೋವಿದ್-೧೯ ಎಂದು ತಪ್ಪಾಗಿ ಬರೆಯುತ್ತಿದ್ದಾರೆ. ಅದು ತಪ್ಪು ಬಳಕೆ. ಆಂಗ್ಲ ಮೂಲದಲ್ಲೂ COVID-19 (ಕೋವಿಡ್-೧೯) ಅಂತಾ ಇದೆ ಕೋವಿದ್ ಅಲ್ಲ.
ಕಾಲಮಾನ
ಇದು ತುಂಬಾ ಹಳೆಯ ಸಂಸ್ಕೃತ ಪದ.
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
ವಿದ್ವಾಂಸ
ವಿರುದ್ಧ ಅರ್ಥದ ಪದಗಳು
ಹೆಡ್ಡ, ದಡ್ಡ, ಅರಿವು ಇಲ್ಲದವ
ಏಕ ವಚನ / ಬಹು ವಚನ
ಕೋವಿದ ಎಂಬುದು ಏಕ ವಚನ ಆದರೆ ಕೋವಿದರು ಎಂಬುದು ಬಹುವಚನ ಆಗಿದೆ. ಆದರೆ ಈ ಎರಡೂ ರೂಪಗಳು ಸಹ ಗೌರವ ಸೂಚಕವೇ ಆಗಿದೆ.
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಸ್ಕೋಲಾರ್, ಸ್ಕಿಲ್ಡ್, ಎಕ್ಸ್ಪರ್ಟ್
ಹಿಂದಿ: ವಿದ್ವಾನ್
ಸಂಸ್ಕೃತ: ವಿದ್ವಾನ್
Kovida (Kannada) - Meaning in English
Scholar, Skilled, Expert, Proficient
कोविद (कन्नड) - हिंदी में अर्थ
विद्वान
कोविद (कन्नड) - संस्कृत अर्थ
विद्वान
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.