ತುಷಾರ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
English: Tushara (Kannada) = Snow, Frost, Mist, Kannada Monthly Magazine about Kannada Literature
हिंदी: तुषार (कन्नड) = हिम, तुषार, बर्फ़, कन्नड भाषा मैं महीने के पत्रिका
संस्कृत: तुषार (कन्नड) = हिम, तुषार, कन्नड भाषा मास पत्रिका
ಅರ್ಥ
ನಾಮಪದ ೧:
ಹಿಮ, ಮಂಜು, ಸ್ನೋ, ಇಬ್ಬನಿ
ನಾಮಪದ ೨:
ಉತ್ಪತ್ತಿ
ಉಪಯೋಗ
- ಕಾಶ್ಮೀರಕ್ಕೆ ಡಿಸೆಂಬರ್ ಅಲ್ಲಿ ಹೋದಾಗ ಇಡೀ ಊರಿನ ತುಂಬಾ ತುಷಾರ ಬೀಳುತ್ತಿತ್ತು.
- ಅಮೇರಿಕಾದ ನ್ಯೂಯಾರ್ಕ್ ಅಲ್ಲಿ ಈ ವರ್ಷ ಭಾರಿ ತುಷಾರ ಬಿದ್ದು ನಮ್ಮ ಮನೆ ಮುಂದಿದ್ದ ಕಾರು ತುಷಾರದಿಂದ ಮುಚ್ಚಿ ಹೋಗಿತ್ತು.
- ಆ ಗೋವಿನ ಬಣ್ಣ ತುಷಾರದಂತೆ ಬಿಳಿಯಾಗಿತ್ತು.
- ಆ ಮುಖಂಡರ ಮನಸ್ಸು ತುಷಾರದಂತೆ ಸ್ವಚ್ಚ ಮತ್ತು ಪರಿಶುದ್ಧವಾಗಿತ್ತು.
- ರಮೇಶನು ಆಗ ತಾನೇ ಬಂದಿದ್ದ ತುಷಾರ ಓದುತ್ತಿದ್ದ.
- ರಮೇಶನು ಆಗ ತಾನೇ ಬಂದಿದ್ದ ತುಷಾರ ಪತ್ರಿಕೆ ಓದುತ್ತಿದ್ದ.
- ಮೊನ್ನೆ ತುಷಾರದಲ್ಲಿ ಖ್ಯಾತ ಲೇಖಕ ಸತ್ಯವೇದ ಅವರ ಲೇಖನ ಬಂದಿತ್ತು.
- ಆ ಹುಡುಗನ ಹೆಸರು ತುಷಾರ್.
- ಅವಳ ಹೆಸರು ತುಷಾರ.
ವಿವರ
ತುಷಾರ ಎಂದರೆ ಹಿಮ, ಮಂಜು, ಸ್ನೋ, ಮಿಸ್ಟ್ ಎಂದರ್ಥ. ತುಷಾರ ಎಂಬುದು ನಾಮ ಪದ ಆಗಿದ್ದು, ಹುಡುಗ / ಹುಡುಗಿಯರಿಗೆ ಈ ಹೆಸರನ್ನು ಇಡುತ್ತಾರೆ.
ಚಿತ್ರಕೃಪೆ: ರೀಡ್ ವೇರ್.ಕಾಂಕನ್ನಡದ ಸಾಹಿತ್ಯ ಮಾಸಪತ್ರಿಕೆ ಹೆಸರೂ ಕೂಡಾ ತುಷಾರ. ಇದು ಮಣಿಪಾಲ ದಿಂದ ಪ್ರಕಟವಾಗುತ್ತೆ.
ಈ ಹೆಸರನ್ನು ಹುಡುಗಿ ಅಥವಾ ಹುಡುಗರಿಗೆ ಇಡುತ್ತಾರೆ. ಹುಡುಗರಿಗೆ ಇಟ್ಟರೆ ತುಷಾರ್ ಎಂದು ಉಚ್ಚರಿಸುತ್ತಾರೆ.
ಮಹಾಭಾರತದ ಶಾಂತಿ ಪರ್ವದಲ್ಲಿ ತುಷಾರ ಎಂಬ ರಾಜ್ಯದ ಪ್ರಸ್ತಾಪ ಬರುತ್ತೆ. ಅಲ್ಲಿನ ಯೋಧರು ಬಂದು ಕೌರವರ ಜೊತೆ ಕುರುಕ್ಷೇತ್ರದ ಯುದ್ಧದಲ್ಲಿ ಹೋರಾಟಕ್ಕೆ ಸೇರುತ್ತಾರೆ. ಆಗಿನ ತುಷಾರ ರಾಜ್ಯವೇ ಇಂದಿನ ತೊಕಾರಿಸ್ತಾನ್ (Tokharistan)
ಕಾಲಮಾನ
ಮೂಲ ಭಾಷೆ
ಇದೇ ಅರ್ಥದ ಪದಗಳು
ಬೇರೆ ಭಾಷೆಗಳಲ್ಲಿ
Tushara (Kannada) - Meaning in English
Snow, Frost, Mist, Kannada Monthly Magazine about Kannada Literature
तुषार (कन्नड) - हिंदी में अर्थ
हिम, तुषार, बर्फ़, कन्नड भाषा मैं महीने के पत्रिका
तुषार (कन्नड) - संस्कृत अर्थ
हिम, तुषार, कन्नड भाषा मास पत्रिका
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.