ಯಕೃತ್ತು

ಯಕೃತ್ತು
ಪದಮಂಜರಿ.ಕಾಂ  

ಯಕೃತ್ತು ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಲಿವರ್, ಪಿತ್ತಜನಕಾಂಗ

English: Yakrittu (Kannada) = Liver

हिंदी: यकृत्तु (कन्नड) = लिवर, जिगर

संस्कृत: यकृत्तु (कन्नड) = यकृत्

ಅರ್ಥ

ನಾಮಪದ:

ಲಿವರ್, ಪಿತ್ತಜನಕಾಂಗ

ಉತ್ಪತ್ತಿ

ಈ ಪದದ ಮೂಲ ಸಂಸ್ಕೃತದ ಯಕೃತ್ ತತ್ಸಮ ಪದ ಆಗಿದೆ. ಯಕೃತ್ತು ತದ್ಭವ ಪದ ಹೇಳಬಹುದು.

ಉಪಯೋಗ

ನಾಮಪದ:
  • ವೈದ್ಯರು ಯಕೃತ್ತಿನ ಸಮಸ್ಯೆಗೆ ಔಷಧಿ ಕೊಟ್ಟರು.
  • ಮನುಷ್ಯನ ದೇಹದಲ್ಲಿ ಯಕೃತ್ತು ಒಂದು ಅತಿ ಮುಖ್ಯ ಅಂಗ.
  • ಮದ್ಯಪಾನ ಮಾಡುವದರಿಂದ ಯಕೃತ್ತು ಹಾಳಾಗುತ್ತದೆ.

ವಿವರ


ಚಿತ್ರಕೃಪೆ:  Elionas2 ಇಂದ Pixabay

ಮನುಷ್ಯನ ದೇಹದಲ್ಲಿ ಯಕೃತ್ತು ಹೊಟ್ಟೆಯ ಒಳಗೆ ಬಲ ಭಾಗದಲ್ಲಿ ಮೇಲೆ ಇರುತ್ತದೆ. ಇದು ಅಚ್ಚ ಕೆಂಪು-ಕಂದು ಬಣ್ಣದ ಕೋನ ಆಕಾರದ ದೇಹದ ದೊಡ್ಡ ಅಂಗ ಆಗಿದೆ.

ಯಕೃತ್ತು ಕಶೇರುಕ ಪ್ರಾಣಿಗಳಲ್ಲಿ ಈ ಮುಂದಿನ ಪ್ರಮುಖ ಕೆಲಸಗಳನ್ನು ಮಾಡುತ್ತದೆ.

  • ಜೀರ್ಣಾಂಗಗಳಿಂದ ಬರುವ ರಕ್ತದಿಂದ ಹಾನಿಕಾರಕ ರಾಸಾಯನಿಕ ತೆಗೆದು ಫಿಲ್ಟರ್ ಮಾಡಿ ಬೇರೆ ಅಂಗಗಳಿಗೆ ಕಳುಹಿಸುತ್ತದೆ. ರಕ್ತವನ್ನು ಪರಿಶುದ್ಧ ಮಾಡುವದು ಇದರ ಒಂದು ಕೆಲಸ.
  • ಜೀರ್ಣ ಮಾಡಲು ಬೇಕಾದ ಜೈವಿಕ ರಾಸಾಯನಿಕ (ಬಯೋ ಕೆಮಿಕಲ್)ಗಳ ಮಾಡುವದು. ಇದರಲ್ಲಿ ಮುಖ್ಯವಾದದ್ದು ಬೈಲ್ ರಸ, ಇದು ಲಿವರ್ ತಯಾರಿಸುತ್ತದೆ. ಈ ಬೈಲ್ ರಸ ಜಿಡ್ಡು, ಎಣ್ಣೆ, ಕೊಲೆಸ್ಟ್ರಾಲ್ ವಿಭಜಿಸಿ ಜೀರ್ಣ ಮಾಡಲು ಚಿಕ್ಕ ಕರುಳಿಗೆ ಸಹಾಯ ಮಾಡುತ್ತೆ.
  • ದೇಹಕ್ಕೆ ಅಗತ್ಯವಾದ ಪ್ರೋಟೀನ್ ತಯಾರಿಸುವದು.
  • ಕೆಲವು ಹಾರ್ಮೋನುಗಳ ತಯಾರಿಕೆ.
  • ಕೆಂಪು ರಕ್ತ ಕಣಗಳ ವಿಭಜಿಸಿ ಬಿಲ್ಯುರಿಬಿನ್ ಎಂಬ ಹಳದಿ ಬಣ್ಣದ ರಸ ಉತ್ಪಾದಿಸಿ ಅದನ್ನು ಬೈಲ್ ರಸದಲ್ಲಿ ಕಳುಹಿಸುತ್ತದೆ.
  • ಇಷ್ಟೇ ಅಲ್ಲ ಇನ್ನೂ ಹಲವು ಕೆಲಸ ಯಕೃತ್ತು ಮಾಡುತ್ತದೆ. ಒಟ್ಟಿನಲ್ಲಿ ಇದು ಅತಿ ಮುಖ್ಯ ಅಂಗ.

ಕಾಲಮಾನ

ಈ ಪದ ಪ್ರಾಚೀನ ಕಾಲದ ಆಯುರ್ವೇದ ಶಾಸ್ತ್ರದ ಹಲವು ಗ್ರಂಥಗಳಲ್ಲಿ ಬಳಸಲಾಗಿದೆ.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ಲಿವರ್, ಪಿತ್ತ ಜನಕಾಂಗ

ಏಕ ವಚನ / ಬಹು ವಚನ

ಯಕೃತ್ತು ಇದು ಏಕ ವಚನ. ಇದರ ಬಹು ವಚನ ಯಕೃತ್ತುಗಳು.

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಲಿವರ್
ಹಿಂದಿ: ಜಿಗರ್, ಲಿವರ್
ಸಂಸ್ಕೃತ: ಯಕೃತ್

Yakrittu (Kannada) Meaning in English

Liver

यकृत्तु (कन्नड) - हिंदी में अर्थ

लिवर, जिगर

यकृत्तु (कन्नड) - संस्कृत अर्थ

यकृत्

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು